Home

                 

  -:PGR Online Service Contact No: 08353-256221:-

A Brief Note about TMC TERDAL

                              ಈ ಮೂಲಕ  ತೇರದಾಳ ಪಟ್ಟಣದ ಸಾರ್ವಜನಿಕರಿಗೆ ತಿಳಿಸುವುದೇನಂದರೆ, ದಿನಾಂಕ 14-05-2010 ರಂದು ತೇರದಾಳ ಪುರಸಭೆಯಲ್ಲಿ ಜನನ&ಮರಣದ ನೊಂದಣೆಯಾದ ದಾಖಲೆಗಳು ಗಣಕಿಕೃತವಾಗಿದ್ದು ದಿನಾಂಕ:01-01-1989 ರಿಂದ 31-12-2008 ರವರೆಗೆ ಲಭ್ಯವಾಗುತ್ತಿವೆ. ಮತ್ತು ದಿನಾಂಕ 01-06-2008 ರಿಂದ ನೊಂದಣೆ/ದಾಖಲೆಯಾದ ವರದಿಗಳು ಸಹ ಗಣಕಿಕೃತ ಜನನ &ಮರಣ ಪ್ರಮಾಣ ಪತ್ರಗಳನ್ನು ನೀಡಲಾಗುವುದು.ಪ್ರಯುಕ್ತ ತೇರದಾಳ ಪಟ್ಟಣದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ತೇರದಾಳದ ದಕ್ಷಿಣ ಮಹಾರಾಷ್ಟ್ರದಲ್ಲಿದ್ದ ವಿಷ್ಣುವರ್ದನ್ ಸಂಸ್ಥಾನಗಳ ಪೈಕಿ ಸಾಂಗ್ಲಿಯ ಸಂಸ್ಥಾನವು ಎಲ್ಲಕ್ಕಿಂತ ದೊಡ್ಡದಾಗಿತ್ತು. ಈ ಸಂಸ್ಥಾನದ ಅಧಿವೆಶನದಲ್ಲಿ ತೇರದಾಳ 17 ಹಳ್ಳಿಗಳನ್ನು ಹೊಂದಿರುವ ಪ್ರಮುಖ ತಾಲೂಕಾ ಕೇಂದ್ರವಾಗಿತ್ತು. ಕರ್ನಾಟಕ ಏಕಿಕರನದ ನಂತರ 1973ರಲ್ಲಿ ಮೈಸೂರು ಮುನಸಿಪಾಲ್ಟಿ ಕಾಯ್ದೆಯನ್ವಯ ಪ್ರಥಮದಲ್ಲಿ ಪಂಚಾಯತ್ ಮಾರ್ಪಾಟಾಗಿ ಪುರಸಭೆಯಾಗಿ ಪರಿವರ್ತನೆ ಆಗಿದೆ, ಈ ತೇರದಾಳ  5.25 ಕಿ.ಮೀ ಭೌಗೋಳಿಕ ವಿಸ್ತಿರ್ಣ ಹೊಂದಿದೆ.         


      ತೇರದಾಳ ಪಟ್ಟಣವು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿಗೆ ಸೇರಿದ್ದು ಈ ಪಟ್ಟಣವು ಸುಮಾರು 35000 ದಿಂದ 40000 ಜನಸಂಖ್ಯೆ ಹೊಂದಿದೆ. ಅತಿ ಹೆಚ್ಚು ಕಂದಾಯ ಹೊಂದಿದ ಹಾಗೂ ಶಿಲಾ ಯುಗದ ಕುರುಹುಗಳನ್ನು ಹೊಂದಿರುವ ಪುರಾತನ ನಗರವಾಗಿದೆ. ಐತಿಹಾಸಿಕ ಪುರಾತನ ಪುಣ್ಯ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಮುಖ ವ್ಯಾಪಾರ ಕೇಂದ್ರ, ಕುಂತಳೆ, ಚಾಲುಕ್ಯ ಚಕ್ರವರ್ತಿ ಆರನೇಯ ವಿಕ್ರಮಾಧಿತ್ಯನ ಮಾಂಡಲಿಕರಾದ ಶಿಲಾಹಾ ವಂಶದ ಗೊಂಗರಸರು ತೇರದಾಳ ಕಂಪನ (ವಿಭಾಗ)ಗಳನ್ನು ತೇರದಾಳ ರಾಜಧಾನಿಯಿಂದ ಆಳುತ್ತಿದ್ದ ವಿಷಯ ತೇರದಾಳದ ದೊಡ್ಡ ಬಸದಿಯಲ್ಲಿ ಇರುವ ಜೈನ್ ಶಾಸನದಿಂದ ತಿಳಿದು ಬರುತ್ತದೆ. ಈ ಶಾಸನದ ಪ್ರಕಾರ ತೇರದಾಳ ಹೆಸರು "ತೇರಿದಾಳ" ಎಂದಿತ್ತು. 15ನೇ ಶತಮಾನದ ಖ್ಯಾತ ವಚನಕಾರ ತೇರದಾಳದ ಶ್ರೀ ಮಗಿಯನರೇಂದ್ರರು ತಮ್ಮ ವಚನಗಳಲ್ಲಿ "ತ್ರಿವಳಿಪುರ" ಎಂದಿರುವರು "ತೇರಿದಾಳ > ತ್ರಿವಳಿಪುರ > ತೇರದಾಳ.


 


 

ಗಣಕೀಕರಣ : 

* ತೇರದಾಳ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.ಶೀಘ್ರದಲ್ಲೇ   ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. 

* 1989 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ

* ಜನನ - ಮರಣ ದಾಖಲೆಗಳ್ನು ನೋಡುವದಕ್ಕಾಗಿ http://www.terdaltown.gov.in/egbnd/index.jsp  ಕ್ಲಿಕ್   ಮಾಡಬಹುದು.

 

ಸಾರ್ವಜನಿಕ ದೂರು ನಿವಾರಣಾ ಕೇಂದ್ರ(Public Grievance Redressal System (P.G.R)):  ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಹಾಗೂ ದಿನದ 12 ಘಂಟೆಗಳು ಕಾರ್ಯನಿರ್ವಹಿಸುತ್ತಿರುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ ಲೈನ್ ಆಪ್ಲೀಕೇಷನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ಸಹಾಯವಾಣಿ ಸಂಖ್ಯೆ: 08353-256221 ಹಾಗೂ ಅಧಿಕೃತ ವೆಬ್ ಸೈಟ್ :www.terdaltown.gov.in 

ಸ್ತಳಿಯ ಸಂಸ್ಥೆಯ ವೆಬ್ ಸೈಟ್ :- ತೇರದಾಳ ಪುರಸಭೆಯ ಅಧಿಕೃತ ಅಂತರ್ಜಾಲ :www.terdaltown.gov.in  ಸಾರ್ವಜನಿಕರಿಗೆ ಬೇಕಾದ ಕಛೇರಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಇದರ ಮೂಲಕ ಪಡೆಯಬಹುದು.

 

* Computerisation :

* Properties within Terdal TMC limits have been identified & details have been collected & Computerisation of records is under progress. Citizens can avail this facility to pay property tax shortly.

* Birth & Death records are available online from the year 1989  to still the date . Citizens can make use of this facility to register & obtain Birth & Death Certificates.

ತೇರದಾಳ ಪುರಸಬೆ ವ್ಯಾಪ್ತಿಯಲ್ಲಿ ಬರುವ ನೀರಿನ ಸಮಸ್ಯೆ ನಿವಾರಿಸಲು ಶ್ರೀ ಎಸ್.ಡಿ.ಜಾಧವ ಅವರನ್ನು ನೋಡಲ ಅಧಿಕಾರಿಯನ್ನಾಗಿ ನೇಮಿಸಿದ್ದಾರೆ ಅವರನ್ನು ಸಂಪರ್ಕಿಸಬಹುದು. Mob: 9448408314

                                  ***ಸಾರ್ವಜನಿಕ ಪ್ರಕಟಣೆ ***

 ತೇರದಾಳ ಪುರಸಭೆ ವ್ಯಾಪ್ತಿಯಲ್ಲಿ ಆರ್ಥಿಕ, ಸಾಮಾಜಿಕ & ಜಾತಿ ಗಣತಿ ಚಾಲನೆ ಕುರಿತು ಸುದ್ದಿ

   ತೇರದಾಳ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಕರದ ದರ  ಪರಿಷ್ಕರಣೆ 

      ತೇರದಾಳ ಪುರಸಭೆ ವ್ಯಾಪ್ತಿಯಲ್ಲಿ ಬರುವ ಮಲ ಹೊರು ಪದ್ದತಿಯನ್ನು ನಿಷೇಧಿಸಲಾಗಿದೆ.

              

"This Page is Maintained by Shri. G. H. KASE, ChiefOfficer TMC Terdal"

                                                            

 Last Updated Dt. 09.02.2012"

No. Of Visitors :
Last Updated   : 23/04/2012  Release History
Release 2.0.0, Powered By Karnataka Municipal Data Society & maintained by Terdal TMC
This website can best viewed with the resolution 1024 * 768 using Internet Explorer 7.0 or above.
Valid CSS!